SCHOOL EDUCATION

Wednesday, 22 July 2020

ASSIGNMENT 9

ಮನೆಯಿಂದಲೇ ಕೆಲಸ ಮಾಡಿ ನೀವು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಹೇಗೆ ಬಳಸಿಕೊಂಡರೆ ಎಂಬುದರ ಬಗ್ಗೆ ಕನಿಷ್ಠ 400 ಪದಗಳ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.


===============@@@@@@@@============

ಜಗತ್ತಿನಲ್ಲಿ ಈ ಕರೂನಾ ಎಂಬ ಮಹಾಮಾರಿಯು ಹೋರಾಡುವದನ್ನು ನಮ್ಮ ದೇಶದ ಕೇಂದ್ರ ಸರ್ಕಾರವೂ ತಡೆಯೂವ ನಿಟ್ಟಿನಲ್ಲಿ ಕಳೆದ ಮಾರ್ಚ್ ನಲ್ಲಿ Work from.Home ಘೋಷಣೆ ಮಾಡಿತು. ಆ ಸಂದರ್ಭದಲ್ಲಿ ಸರ್ಕಾರ, ಖಾಸಗಿ ವಲಯದ ಹಲವಾರು ಉದ್ಯೋಗಿಗಳಿಗೆ ರಜೆ ಘೋಷಣೆ ಮಾಡಿದರೆ ಮತ್ತು ಕೆಲವು ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ಸರಕಾರಿ ಮತ್ತು ಅರೆ ಸರ್ಕಾರಿ ನೌಕರರು ದೀರ್ಘಕಾಲದವರೆಗೆ ಮನೆಯಿಂದ ಹೊರಗಡೆ ಹೋಗದೆ ಮನೆಯಲ್ಲಿ  ಇರಲಾಯಿತು. ಇಂತಹ ಸಂದರ್ಭದಲ್ಲಿ ಬಹಳಷ್ಟು ವಿರಾಮದ ಸಮಯವು ಪ್ರತಿಯೊಬ್ಬರಿಗೆ ದೊರೆಯಿತು.

ಅದೇ ರೀತಿಯಾಗಿ Work from Home ಸಮಯದಲ್ಲಿ ನಮ್ಮ ಶಿಕ್ಷಣ ಇಲಾಖೆಯು ಭದ್ರಬುನಾದಿ ಗಳಾದ ಶಿಕ್ಷಕರುಗಳಿಗೆ ಕೂಡ ಸುಮಾರು ದಿನಗಳವರೆಗೆ ರಜೆ ನೀಡಲಾಗಿತ್ತು.ಈ ಸಂದರ್ಭದಲ್ಲಿ ನಾವು ಶಿಕ್ಷಕರಾದವರು ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಹಲವಾರು ರೀತಿಯಾದ ಕಾರ್ಯಗಳನ್ನು ನಿರ್ವಹಿಸಿದೆ.


"." ಎಂಬ ನುಡಿಯಂತೆ ಸಮಾಜದ ಶಿಕ್ಷಕರಾದವರು ಜವಾಬ್ದಾರಿಯೂ ಕೂಡ ಅಪಾರ. ಹಾಗಾಗಿ 
ಈ ಶಿಕ್ಷಕರಾದವರು ನಿಂತ ನೀರಾಗದೆ ಅವರು ಸದಾಕಾಲ ಹರಿಯುವ ನೀರಿನಂತೆ ಅಧ್ಯಯನಶೀಲರಾಗಬೇಕು ಎಂಬುದು ನಿಜಕ್ಕೂ ಸುಂದರವಾದ ಮಾತು.

ನಾನು ಈ work from Home ಸಂದರ್ಭದಲ್ಲಿ ನನ್ನ ವೃತ್ತಿಯ ನೈಪುಣ್ಯತೆ ಮತ್ತು ಜ್ಞಾನದ ಆಳವನ್ನು ಹೆಚ್ಚಿಸಿಕೊಳ್ಳಲು ಮಾಡಿದ ಕೆಲವು ವಿಚಾರಗಳನ್ನು ಇಲ್ಲಿ ವಿವರಿಸುತ್ತೇನೆ. ಅವುಗಳೆಂದರೆ.

೧) ಯಶೋಧರ ಚರಿತ್ರೆ, ಭರತೇಶವೈಭವ, ಬೆಟ್ಟದ ಜೀವ, ಚೋಮನದುಡಿ ಎಂಬ ಮಹಾಕಾವ್ಯಗಳ ಅಧ್ಯಯನ:- 

ಸ್ನೇಹಿತರೆ ನಮ್ಮ ಕನ್ನಡ ಸಾಹಿತ್ಯದ ಅಪಾರ ಜ್ಞಾನ ಬಂಡಾರ ಮಹಾನ್ ಕಾವ್ಯಗಳಾದ ಮಹಾ ಕವಿ ಜನ್ನ ಬರೆದಿರುವ ಯಶೋಧರ ಚರಿತ್ರೆ, ರತ್ನಾಕರವರ್ಣಿ ಬರೆದಿರುವ ಭರತೇಶ ವೈಭವ ಮತ್ತು ಡಾಕ್ಟರ್ ಶಿವರಾಮ ಕಾರಂತರು ಬರೆದಿರುವ ಚೋಮನದುಡಿ & ಬೆಟ್ಟದ ಜೀವ ಎಂಬ ಮಹತ್ವದ ಕಾವ್ಯಗಳ ವಿವರವಾದ ಅಧ್ಯಯನವನ್ನು ಮಾಡಿರುವೆ.

೨) ಇಲಾಖೆಯಿಂದ ನಡೆದ ಆನ್ಲೈನ್ ತರಬೇತಿಗೆ ಹಾಜರಿ:- 

ಶಿಕ್ಷಕರು ವೃತ್ತಿಪರತೆಯನ್ನು ಹೆಚ್ಚಿಸಲು ಸರಕಾರವು ಈ ಹಂತದಲ್ಲಿ ನಡೆಸಿರುವ ನಲಿಕಲಿ ತರಬೇತಿ ೬-೮ನೇ ತರಗತಿಯ ಇಂಗ್ಲೀಷ್ ತರಬೇತಿಗೆ ಆನ್ಲೈನ್ನಲ್ಲಿ ಹಾಜರಾಗಿ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವೆ. ಇಲಾಖೆಯೂ ನಡೆಸಿದ ಈ ತರಬೇತಿಯಿಂದ ಹಲವಾರು ರೀತಿಯ ಜ್ಞಾನದ ವಿಸ್ತರಣೆ ಮಾಡಲು ಅನುಕೂಲವಾಯಿತು.

೩) ಇಂಗ್ಲೀಷ್ ಗ್ರಾಮರ್ ಅಧ್ಯಯನ:-

ಯೂಟ್ಯೂಬ್ ನಲ್ಲಿ ಹಲವಾರು ತರಹದ ಇಂಗ್ಲೀಷ್ ಗ್ರಾಮರ್ ಗೆ ಸಂಬಂಧಪಟ್ಟಂತಹ ವಿಡಿಯೋಗಳು ನೋಡಬಹುದಾಗಿದ್ದು ಮುಖ್ಯವಾದ ಮಾಹಿತಿಯನ್ನು ಯೂಟ್ಯೂಬ್ ಮೂಲಕ ನೋಡಿ ನಮ್ಮ ವೃತ್ತಿಗೆ ಸಹಾಯಕವಾಗುವಂತೆ ಮಾಡಿದೆ.

೪) ಭಾರತದ ಸಂವಿಧಾನದ ಅಧ್ಯಯನ:- 

ಈ work from home ಸಂದರ್ಭದಲ್ಲಿ ಮಾಡಿರುವ ಒಂದು ಅತ್ಯಂತ ತೃಪ್ತಿಕರವಾದ ಅಧ್ಯಯನವೆಂದರೆ P.S ಗಂಗಾಧರ್ 
ಅವರು ಬರೆದಿರುವ ಭಾರತದ ಸಂವಿಧಾನ ಪುಸ್ತಕ 2016 ಪ್ರಕಾಶನ ವಾದ ಪುಸ್ತಕವನ್ನು ಓದುವ ಮೂಲಕ ಸಂವಿಧಾನದ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವೆ. ಇದು ನನ್ನ ಮಕ್ಕಳಿಗೆ ಸಾಮಾನ್ಯ ಅಧ್ಯಯನ ಜೊತೆಗೆ ಸಂವಿಧಾನದ ಮಹತ್ವವನ್ನು ತಿಳಿಸಿಕೊಡಲು ಪೂರಕವಾಗಿದೆ. 

೫) ಆನ್ಲೈನ್ ನಲ್ಲಿ ನಡೆದ ಕೆಲವು ಪರೀಕ್ಷೆಗಳಿಗೆ ಹಾಜರಿ:-

ಈ ಲೋಕದ ಸಂದರ್ಭದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುವ ಖಾಸಗಿ ಸಂಸ್ಥೆಗಳು ಆನ್ಲೈನ್ ಪರೀಕ್ಷೆಗೆ ತರಬೇತಿ ನೀಡಲಾರಂಭಿಸಿವೆ. ಇಂತಹ ಹಲವಾರುು ಸಂಸ್ಥೆಗಳಿಂದ ಪರೀಕ್ಷೆಗೆ ಹಾಜರಾಗಿ ನನ್ನ್ನ ಜ್ಞಾನವನ್ನು ಹೆಚ್ಚಿಸಿಕೊಂಡಿರುವೆ.

೬) ಇಂಗ್ಲೀಷ್ ಪಾಠೋಪಕರಣಗಳು  ಬಗ್ಗೆ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡಿರುವೆ.:-

ವರ್ಕ್ ಫ್ರಂ ಹೋಮ್ ಅಡಿಯಲ್ಲಿ ನೀಡಲಾದ ಅಸೈನ್ಮೆಂಟ್್ ಅಡಿಯಲ್ಲಿ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ನಾನು ಯೂಟ್ಯೂಬ್ ನಲ್ಲಿ ಮಕ್ಕಳಿಗೆ 
ಹಾಗೂ ಶಿಕ್ಷಕರಿಗೆ ಪಾಠ ಬೋಧನೆ ಮಾಡುವಾಗ ಅನುಕೂಲವಾಗುವ ಪಾಠೋಪಕರಣಗಳ ಬಗ್ಗೆ ಹಲವಾರು ವಿಡಿಯೋಗಳನ್ನು ನೋಡಿಕೊಂಡಿದ್ದೇನೆ. ಇದರಿಂದ ಮಕ್ಕಳಿಗೆ ಚಟುವಟಿಕೆ ಆಧಾರಿತ ಪಾಠ ಬೋಧನೆಯನ್ನು ಮಾಡುವುದು ಹೇಗೆ ಎಂದು ಅರಿತುಕೊಂಡಿದ್ದೇನೆ.



ಹೀಗೆ ನನ್ನ ವೃತ್ತಿ ಪರತೆಯನ್ನು ಪೂರ್ಣತೆಯನ್ನು ಹೆಚ್ಚಿಸಿಕೊಳ್ಳಲು ಈ ಸಂದರ್ಭದಲ್ಲಿ ದೊರೆತರುವ ವಿರಾಮದ ಸಮಯವನ್ನು ಈ ಮೇಲಿನ ರೀತಿಯಲ್ಲಿ ಹತ್ತು ಹಲವಾರು ಕಾರ್ಯಗಳನ್ನು ತೊಡಗಿಕೊಂಡು ನನ್ನ ಜ್ಞಾನವನ್ನು ಪಡೆದಿರುತ್ತೇನೆ.

No comments:

Post a Comment

ಸಂವಿಧಾನದ ಕರ್ತವ್ಯಗಳು ಭೋದಿಸಲಾಯಿತು

ಸಂವಿಧಾನವನ್ನು ಪಾಲಿಸುವುದು, ಅದರ ಆಶಯಗಳನ್ನು ಗೌರವಿಸುವುದು. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು. ಸ್ವಾತಂತ್ರ್ಯ ಹೋರಾಟಕ್ಕೆ ಸ್ಪೂರ್...