ಕೋವಿಡ್-19 ವೈರಸ್ ಸೋಂಕು ಹೊರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ಅದರಲ್ಲೂ ಅವರು ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗಿರುವಂತೆ ಮಾಡಲು ತಮ್ಮ ಸಲಹೆ ಸೂಚನೆ ಮತ್ತು ಕಾರ್ಯತಂತ್ರಗಳು ಪಟ್ಟಿ ಮಾಡಿರಿ.
===============@@@@@@===============
ಚೀನಾದ ವುಹಾನ ಪ್ರಾಂತ್ಯದಿಂದ ಇಡೀ ವಿಶ್ವಕ್ಕೆ ಹರಡಿರುವ ಕರೋನ ವೈರಸ್ ಪಿಡುಗಿನಿಂದಾಗಿ ಸಾವು ಜೊತೆಗೆ ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಆದರೆ ಶಿಕ್ಷಣ ಸಂಸ್ಥೆಗಳು ತೆರೆದುಕೊಂಡಿಲ್ಲ ಕಾರಣ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಸರ್ಕಾರ ಮಕ್ಕಳಿಗೆ ರಜೆಯನ್ನು ಘೋಷಣೆ ಮಾಡಿದೆ. ಇದೆಲ್ಲಾ ಮಾಡಿರುವುದು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ.ಈ ನಡುವೆ ಆನ್ಲೈನ್ ತರತೆಗೆ ತರಗತಿಗಳು ಟಿವಿ ವಾಹಿನಿಗಳು ಮೂಲಕ ಪಾಠ ಬೋಧನೆ ಮತ್ತು ಮಕ್ಕಳಿಗೆ ಜೀವನ ಶಿಕ್ಷಣದ ತರಗತಿಗಳನ್ನು ನಡೆಸುವ ಪ್ರಯತ್ನ ನಡೆಯುತ್ತಿದೆ.
ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಮಾತಿನಂತೆ ಅಂದರೆ ಕರೂನಾಯೆಂಬ ಮಹಾಮಾರಿಯನ್ನು ಒಂದು ಅವಕಾಶದಂತೆ ಬಳಸಿಕೊಂಡು ನಾವು ಇದನ್ನು ನಮ್ಮ ಪರವಾಗಿ ಪಾಲಿಸಿಕೊಂಡು ಆತ್ಮ ನಿರ್ಭರ ಭಾರತದ ನಿರ್ಮಾಣ ಮಾಡಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಈ ಕರೋನ ಎಂಬ ಮಹಾಮಾರಿ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಬರುತ್ತಿದೆ. ಸರಕಾರಗಳು ಎಷ್ಟೇ ಯೋಜನೆ ಗಳು ಹಾಕಿಕೊಂಡರು ಸೋಂಕಿತರ ಸಂಖ್ಯೆ ಕಡಿಮೆ ಮಾಡಲು ಆಗುತ್ತಿಲ್ಲ. ಈ ವಿಷಮ ಪರಿಸ್ಥಿತಿಯನ್ನು ಅವಲೋಕನ ಮಾಡಿದಾಗ ಇದರ ತೀವ್ರತೆಯನ್ನು ಇನ್ನೂ ಕೆಲವು ತಿಂಗಳು/ವರ್ಷಗಳೇ ಮುಂದುವರೆಯುವ ಹಾಗೆ ಕಾಣುತ್ತಿದೆ.
ಹಲವು ತಿಂಗಳುಗಳು work from home ನಂತರವೂ ಹಲವು ಕ್ಷೇತ್ರಗಳು ತೆರೆದುಕೊಂಡು ಕಾರ್ಯನಿರ್ವಹಿಸುತ್ತಿದೆ. ಅದರಂತೆ ಏನಾದರೂ ಪರ್ಯಾಯ ಮಾರ್ಗಗಳ ಮೂಲಕ ಮಕ್ಕಳ ಕಲಿಕೆಗೆ ಶಿಕ್ಷಕರು ಮತ್ತು ಪೋಷಕರು ಅಣಿಯಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ನನ್ನ ಪ್ರಕಾರ ಕರೂನಾಯೆಂಬ ಮಹಾಮಾರಿಯ ಸಂದರ್ಭದಲ್ಲಿ ಮಕ್ಕಳುು ಸದಾ ಕಲಿಕಾಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಮಾಡಲು ಈ ಕೆಳಗಿನ ರೀತಿಯಾದ ಸಲಹೆಗಳುು ಅಥವಾ ಮಾರ್ಗಗಳು ಅನುಸರಿಸಿದರೆ ಉತ್ತಮ ಎಂದು ಭಾವಿಸುತ್ತೇನೆ.
೧) ಆನ್ಲೈನ್ ಶಿಕ್ಷಣ:-
ಕರುಣೆಯೆಂಬ ವೈರಸ್ ಆರಂಭವಾದಾಗಿನಿಂದ ಪ್ರತಿಯೊಬ್ಬರ ಬಾಯಿಂದ ಬಂದ ಉತ್ತರವೇ ಆನ್ಲೈನ್ ಶಿಕ್ಷಣ. ಈ ಶಿಕ್ಷಣಕ್ಕೆ ಈಗಾಗಲೇ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮೊರೆ ಹೋಗಿವೆೆ ಆದರೆ ನಮ್ಮ ಸರಕಾರಿ ಶಾಲೆಗಳು ಎಂದಾಕ್ಷಣ ಅದರಲ್ಲಿಯೂ ಬಡವರ ಮಕ್ಕಳು ಎಂಂಬುದು ಕಲ್ಪನೆ. ಈ ಕಲ್ಪನೆ ನಿಜವೂ ಕೂಡ ಆಗಿರಬಹುದು. ಆ ಮಕ್ಕಳಿಗೆ ಇಂತಹ ದುಬಾರಿ ವೆಚ್ಚದ
ಸಲಕರಣೆಗಳು ಖರೀದಿ ಮಾಡುವುದು ಕಷ್ಟಸಾಧ್ಯ ಖರೀದಿ ಮಾಡಿದರು ನಮ್ಮಂತಹ ಹಳ್ಳಿಗಳಿಗೆ ನೆಟ್ವರ್ಕ್ ಸಮಸ್ಯೆ ಕಾಡುತ್ತದೆ. ಈ ರೀತಿಯಾದ ಶಿಕ್ಷಣದಿಂದ ಮಕ್ಕಳಿಗೆ ಕಲಿಕೆಯ ಫಲಗಳು ವರ್ಗಾವಣೆ ಕಷ್ಟಸಾಧ್ಯ.
೨) ಶಿಕ್ಷಕರ ಮನೆ ಭೇಟಿ:-
ನನ್ನ ಪ್ರಕಾರ ಈ ವಿಧಾನವು ಅತ್ಯಂತ ಪರಿಣಾಮಕಾರಿ ಮತ್ತು ಸರಳವಾಗಿದೆ. ಶಿಕ್ಷಕರಾದವರು ತಮ್ಮ ಊರಿನ/ಶಾಲೆಯ ಮಕ್ಕಳಿಗೆ ಸ್ವತಹ ಭೇಟಿ ಮಾಡಿ ಗೃಹಪಾಠದ ವಿಧಾನ ಕಲಿಕೆಯ ವಿಷಯ ತಿಳಿಸಿ ಅವರು ಗೃಹಪಾಠ ವೀಕ್ಷಿಸುವುದು ಮಾಡಿದರೆ ತುಂಬಾ ಉತ್ತಮವಾಗಿರುತ್ತದೆ.
೩) ವಾಟ್ಸಾಪ್ ಬಳಕೆ:-
ಶಿಕ್ಷಕರಾದವರು ತಮ್ಮಲ್ಲಿರುವ ವಾಟ್ಸಾಪ್ ಬಳಸಿ ತಮ್ಮ ತರಗತಿಯ ಮಕ್ಕಳ ಗುಂಪುಗಳನ್ನು ರಚಿಸಿ ಆ ಮಕ್ಕಳಿಗೆ ಗೃಹಪಾಠ ,ವಿಷಯ ಬೋಧನೆ ಮಾಡಿ ಪ್ರತಿ ವಾರದಲ್ಲಿ ಎರಡು ದಿನ ಮನೆ ಭೇಟಿ ಮಾಡಿ ವಿಚಾರಿಸುವುದು.
೪) ವಿಡಿಯೋಕಾಲ್ ಮೂಲಕ ಪಾಠ:-
ಶಿಕ್ಷಕರಾದವರು ಸಾಮಾಜಿಕ ಜಾಲತಾಣದಲ್ಲಿರುವ ಆಪ್ ಗಳನ್ನು ಬಳಸಿಕೊಂಡು. ಉದಾಹರಣೆಗೆ :- GOOGLE MEET, DUO, WHATSAPP ಮೂಲಕ ತಮ್ಮ ಮಕ್ಕಳಿಗೆ ವಿಡಿಯೋ ಕಾಲ್ ಮಾಡಿ ಪಾಠ ಮಾಡುವುದು.
೫) ಆನ್ಲೈನ್ ಎಜುಕೇಶನ್ ಆಪ್ಸ್:-
ಅಂತರ್ಜಾಲದಲ್ಲಿ ಲಭ್ಯವಿರುವ ಆನ್ಲೈನ್ ಎಜುಕೇಶನ್ ಆಪ್ಸ್ ಗಳನ್ನು ಬಳಸಿಕೊಂಡು ಪಾಠ ಮಾಡುವುದು.
ಉದಾಹರಣೆಗೆ:- my homework app, Evernote app, Dropbox, easybip, set control etc
6) ಸಹಪಠ್ಯ ಚಟುವಟಿಕೆಗಳಿಗೆ ಅವಕಾಶ:-
ಈ ಕರುಣಾ ಸಂದರ್ಭದಲ್ಲಿ ಶಿಕ್ಷಕರಾದ ನಾವು ಮಕ್ಕಳಿಗೆ ಸದಾ ಕಾಲ ನಿರಂತರವಾಗಿ ಪ್ರಯತ್ನ ಮಾಡಬಹುದು ಎಂಬುದು ಅರಿವು ಮಾಡಿಸಿ ಕೊಡಬೇಕಾಗಿ.
ಅದಲ್ಲದೆ ಈ ಒಂದು ವಿಷಮ ಪರಿಸ್ಥಿತಿಯಲ್ಲಿ ಶಿಕ್ಷಕರಾದ ನಾವು ಪೋಷಕರೊಂದಿಗೆ ಕೈಜೋಡಿಸಿ ಮಗುವಿಗೆ ನಿರಂತರ ಕಲಿಕೆಗೆ ಅವಕಾಶ ಮಾಡಿ ಕೊಡುವುದು ಉತ್ತಮ. ಈ ಪರಿಸ್ಥಿತಿಯ ಸದುಪ ಸದುಪಯೋಗ ಪಡೆದುಕೊಂಡು ಮಗು ಎಂಬ ವಾಹನದ ಎರಡು ಚಕ್ರಗಳ ಆಗಿ ಶಿಕ್ಷಕರು ಮತ್ತು ಪೋಷಕರು ಕಾರ್ಯನಿರ್ವಹಿಸಿ ಮಗುವೆಂಬ ಕಲಿಕೆಯ ವಾಹನವನ್ನು ಎಳೆದು ಗುರಿ ಮುಟ್ಟಿಸುವ ಕಾರ್ಯ ನಮ್ಮೆಲ್ಲರಿಂದ ಸಾಧ್ಯ ಆಗಬೇಕು.
ಇಂತಹ ಸ್ಥಿತಿಯಲ್ಲಿ ಕೂಡ ಯಾವುದೇ ಮಗು ಕಲಿಕೆಯಿಂದ ವಂಚಿತವಾಗಿದೆ ನಿರಂತರವಾಗಿ ಕಲಿಕೆ ನಡೆಯಲು ನೆರವಾಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
No comments:
Post a Comment